ಶೇಷಾದ್ರಿಪುರಂ ಸ್ವತಂತ್ರ ಪೂರ್ವ ವಿಶ್ವವಿದ್ಯಾಲಯ ಕಾಲೇಜು ಯಲಹಂಕ, ಬೆಂಗಳೂರು-೬೪
ಪ್ರವೇಶ
ಅರ್ಹತೆ ಮತ್ತು ಪ್ರವೇಶ ವಿಧಾನ
ಕರ್ನಾಟಕ ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ಪರೀಕ್ಷೆ (೧೦ನೇ/ಎಸ್ಎಸ್ಎಲ್ ಸಿ) ಅಥವಾ ಕರ್ನಾಟಕದ ಪದವಿ ಪೂರ್ವ ಶಿಕ್ಷಣ ಮಂಡಳಿಯಿಂದ ಗುರುತಿಸಲ್ಪಟ್ಟ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮೊದಲನೇ ವರ್ಷದ ಪಿಯುಸಿಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.
ಕರ್ನಾಟಕ ರಾಜ್ಯದ ಹೊರಗಿನ ಅಭ್ಯರ್ಥಿಗಳು ವಲಸೆ ಪ್ರಮಾಣಪತ್ರ ಮತ್ತು ಅರ್ಹತಾ ಪ್ರಮಾಣಪತ್ರವನ್ನು ನೀಡಬೇಕು.
ಅಂತಹ ವಿದ್ಯಾರ್ಥಿಗಳಿಗೆ ಆಯ್ಕೆ ಮತ್ತು ಪ್ರವೇಶಕ್ಕಾಗಿ ವೀಸಲಿಟ್ಟಿರುವ ರಿಯಾಯಿತಿಗಳು ಮತ್ತು ಸವಲತ್ತುಗಳನ್ನು ಪಡೆಯಲು ತಹಶೀಲ್ದಾರ್ ಸರಿಯಾಗಿ ಸಹಿ ಮಾಡಿದ ನಿಗದಿತ ನಮೂನೆಯಲ್ಲಿ ಜಾತಿ ಪ್ರಮಾಣಪತ್ರವನ್ನು ಲಗತ್ತಿಸಬೇಕು.
ವಿದ್ಯಾರ್ಥಿಯ ಹೆಸರಿನಲ್ಲಿ ಕಾಲೇಜಿನಿಂದ ಪಡೆದ ಅರ್ಜಿ ನಮೂನೆಗಳನ್ನು ಸರಿಯಾಗಿ ಭರ್ತಿ ಮಾಡಿ ನಿಗದಿತ ದಿನಾಂಕದಂದು ಅಥವಾ ಅದಕ್ಕಿಂತ ಮೊದಲು ಪ್ರಾಂಶುಪಾಲರಿಗೆ ಸಲ್ಲಿಸಬೇಕು.
ವರ್ಗಾವಣೆ ಪತ್ರ ‘ಪ್ರಮಾಣೀಕೃತ ಪ್ರತಿಗಳು’ ಹಾಗೂ ಅಂಕಪಟ್ಟಿಯ ಮೂಲ ಪ್ರತಿಯನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು.
ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಕಾಲೇಜಿನ ಸೂಚನಾ ಫಲಕದಲ್ಲಿ ತಿಳಿಸಿದ ದಿನಾಂಕದಂದು ಪ್ರಕಟಿಸಲಾಗುವುದು. ನಿಗದಿತ ದಿನಾಂಕದ ಮೊದಲು ಪ್ರವೇಶ ಪಡೆಯದಿರುವವರು ತಮ್ಮ ಪ್ರವೇಶ ಹಕ್ಕನ್ನು ಕಳೆದುಕೊಳ್ಳುತ್ತಾರೆ.
ನೀಡಲಾಗುವ ಭಾಷೆಗಳು ೧೦ನೇ ತರಗತಿಯಲ್ಲಿ ನೀಡಲಾಗುವ ಭಾಷೆಯಂತೆಯೇ ಇರುತ್ತವೆ.
ಪ್ರವೇಶದ ನಂತರ ವಿಷಯ ಅಥವಾ ವಿಭಾಗದ ಬದಲಾವಣೆಗೆ ಯಾವುದೇ ಅವಕಾಶವಿಲ್ಲ.
ಕಾಲೇಜು ಮಾಡಿದ ಪ್ರವೇಶವು ತಾತ್ಕಾಲಿಕವಾಗಿರುತ್ತದೆ, ಯಾವುದೇ ಹಂತದಲ್ಲಿ ಪ್ರವೇಶವನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಕಾಯ್ದಿರಿಸುವ ಪದವಿ ಪೂರ್ವ ಶಿಕ್ಷಣ ಮಂಡಳಿಯ ಅನುಮೋದನೆಗೆ ಒಳಪಟ್ಟಿರುತ್ತದೆ.
ನೀಡಬೇಕಾದ ಪ್ರಮಾಣಪತ್ರಗಳು
ನಕಲು ಪ್ರತಿಯೊಂದಿಗೆ ಪರಿಶೀಲನೆಗಾಗಿ ಮೂಲ ಎಸ್.ಎಸ್.ಎಲ್.ಸಿ ಅಂಕಪಟ್ಟಿ.
ನಕಲು ಪ್ರತಿಯೊಂದಿಗೆ ಮೂಲ ವರ್ಗಾವಣೆ ಪ್ರಮಾಣಪತ್ರ.
ಶುಲ್ಕ ರಚನೆಯಲ್ಲಿ ಘೋಷಿಸಿದಂತೆ ಸೂಚಿಸಲಾದ ಮೊತ್ತಕ್ಕೆ ಮೂಲ ಡಿಮ್ಯಾಂಡ್ ಡ್ರಾಫ್ಟ (DD).
ICSE/CBSE ವಿದ್ಯಾರ್ಥಿಗಳು ಅಂಕಪಟ್ಟಿ ಮತ್ತು ವರ್ಗಾವಣೆ ಪತ್ರ ಎರಡರ ಎರಡು ನಕಲಿ ಪ್ರತಿಗಳನ್ನು ಸಲ್ಲಿಸಬೇಕು.
ಪ್ರವೇಶದ ಸಮಯದಲ್ಲಿ ಪೋಷಕರು ತಮ್ಮ ಮಗ/ಮಗಳೊಂದಿಗೆ ಬರಬೇಕು.
ಅರ್ಹತೆಗಳು, ವಿದ್ಯಾರ್ಥಿವೇತನಗಳು
ಶೇ.೯೫% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಪ್ರಥಮ ಪಿಯುಸಿಗೆ ಉಚಿತ ಶಿಕ್ಷಣ.
ಎಸ್.ಎಸ್.ಎಲ್.ಸಿ ಹಗೂ ತತ್ಸಮಾನ ಶಿಕ್ಷಣದಲ್ಲಿ ಶೇ.೯೦% ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಪ್ರಥಮ ಪಿಯುಸಿ ದಾಖಲಾತಿಯಲ್ಲಿ ರೂ.೧೦,೦೦೦/-ಗಳ ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ.
ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ, ರಾಜ್ಯಕ್ಕೆ ರ್ರ್ಯಾಂಕ್ ಬಂದ SPUCY ವಿದ್ಯಾರ್ಥಿಗೆ ನಗದು ಬಹುಮಾನ ನೀಡಲಾಗುವುದು.